Pimples on Face : ಮುಖದಲ್ಲಿ ಸದಾ ಮೊಡವೆ ಯಾಗಲು ಕಾರಣವೇನು ಗೊತ್ತಾ?
ಅನೇಕರಿಗೆ ಮುಖದಲ್ಲಿ ಮೊಡವೆಗಳು ಉಂಟಾಗಿ ಸಮಸ್ಯೆಯನ್ನು ಉಂಟು ಮಾಡುತ್ತದೆ. ಕೆಲವರಿಗೆ ನಿವಾರಣೆಯಾದರೆ ಇನ್ನೂ ಕೆಲವರಿಗೆ ಒಂದರ ನಂತರ ಒಂದು ಆಗುತ್ತಲೇ ಇರುತ್ತವೆ, ಅದಕ್ಕೆ ಬೇಕಾದ ಪರಿಹಾರವೆಂದರೆ:-
ಆಹಾರ ಪದ್ಧತಿ:- ಅತೀಯಾದ ಜಂಕ್ ಫುಡ್ ಗಳ ಸೇವನೆ ಮತ್ತು ಅತೀಯಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸುವುದರಿಂದ ಮುಖದಲ್ಲಿ ಮೊಡವೆಗಳು ಉಂಟಾಗುತ್ತವೆ. ಇವುಗಳನ್ನು ಸೇವಿಸುವುದನ್ನು ಬಿಟ್ಟುಬಿಡಬೇಕು.
ಒತ್ತಡ:- ಸದಾ ಒತ್ತಡದಲ್ಲಿರುವುದು, ಒಂದು ವಿಷಯದ ಬಗ್ಗೆ ಅತಿಯಾಗಿ ಯೋಚಿಸುವುದರಿಂದ ಮುಂತಾದವುಗಳು ಮೊಡವೆಗಳು ಉಂಟಾಗಲು ಕಾರಣಗಳಾಗುತ್ತದೆ. ಮುಖದ ಯೋಗವನ್ನು ಮಾಡುವುದರಿಂದ ತ್ವಚೆಯನ್ನು ಕಾಪಾಡಿ ಕೊಳ್ಳಬಹುದು.
ಹಾರ್ಮೋನುಗಳ ಬದಲಾವಣೆ:- ಪ್ರೌಢವಸ್ಥೆಯಲ್ಲಿ ಅಥವಾ ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಹಾರ್ಮೋನುಗಳ ಬದಲಾವಣೆಗಳು ಮೊಡವೆಗಳ ಅಪಾಯವನ್ನು ಹೆಚ್ಚಿಸಬಹುದು.
ಡೈರಿ ಉತ್ಪನ್ನಗಳು:- ಕೆಲವು ಆಹಾರ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ಚೀಸ್ ಮತ್ತು ಸಕ್ಕರೆಯ ಆಹಾರಗಳು ಮೊಡವೆಗೆ ಕಾರಣಗಳಾಗುತ್ತವೆ. ಆರೋಗ್ಯ ಸಮಸ್ಯೆ:-ಮಧುಮೇಹದಂತಹ ಕೆಲವು ಚಯಾಪಚಯ ರೋಗಗಳು, ಪಿಸಿಓಡಿ, ಪಿಸಿಓಎಸ್‌ಗಳಂತವುಗಳು ಮೊಡವೆಗಳನ್ನು ಉಂಟು ಮಾಡುತ್ತವೆ.
ರಾಸಾಯನಿಕ ಉತ್ಪನ್ನಗಳು:- ಸೌಂದರ್ಯವರ್ಧಕಗಳು, ಕೂದಲಿನ ಉತ್ಪನ್ನಗಳು ಮತ್ತು ಸಾಬೂನುಗಳoತಹ ಸುಗಂಧ ದ್ರವ್ಯಗಳ ಬಳಕೆಯು ಕೂಡಾ ಕೆಲವು ವ್ಯಕ್ತಿಗಳಿಗೆ ಮೊಡವೆಗಳನ್ನು ಉಂಟು ಮಾಡುತ್ತದೆ.
ಅನುವಂಶೀಯತೆ:- ಮೊಡವೆಗಳು ಜೆನೆಟಿಕ್ಸ್ ಪಾತ್ರವನ್ನು ವಹಿಸುತ್ತವೆ. ನಿಮ್ಮ ಪೋಷಕರು ಅಥವಾ ನಿಮ್ಮ ಕುಟುಂಬದವರು ಮೊಡವೆಗಳನ್ನು ಹೊಂದಿದ್ದರೆ ಅದು, ಕೂಡಾ ನಿಮಗೆ ಬರುವ ಸಾಧ್ಯತೆಗಳಿವೆ. ಕಳಪೆ ಜೀವನ ಶೈಲಿ:- ನೀವು ಮಲಗುವ ದಿಂಬಿನ ಕವರಗಳನ್ನು ಆಗಾಗ ಬದಲಿಸಬೇಕು. ತಲೆ ಹೊಟ್ಟು ನಿರ್ಜಲೀಕರಣ, ಋತುಚಕ್ರ ಸಮಸ್ಯೆಯಿಂದ ಕೂಡಾ ಮೊಡವೆಗಳು ಉಂಟಾಗಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Read This Also : ದೇಶದ ತುಂಬೆಲ್ಲ ಚರ್ಚೆ ಆಗುತ್ತಿರುವ CAA ಎಂದರೇನು ? ಇಲ್ಲಿದೆ ಸಂಪೂರ್ಣ ಮಾಹಿತಿ!
ಇದೇ ರೀತಿಯ ಎಲ್ಲ ಮಾಹಿತಿ ಗಳನ್ನೂ ತಿಳಿಯಲು ನಮ್ಮ ವಾಟ್ಸ್ ಆಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.